Shades of Life - ಬದುಕಿನ ಬಣ್ಣಗಳು

   ನಮ್ಮ ಸುತ್ತಲೂ ಪ್ರಕೃತಿ ಚೆಲ್ಲಿರುವ ಬಣ್ಣದ ಓಕುಳಿ ಕಣ್ಣಿಗೆ  ಹಬ್ಬ, ಮನಕ್ಕೆ ಮುದ ನೀಡುತ್ತದೆ. ಜೀವನದಲ್ಲಿ ರಂಗು ತುಂಬುತ್ತದೆ. ಅಂತಹ ಬಣ್ಣಗಳನ್ನು ಕುಂಚದಲ್ಲಿ ಸೆರೆಹಿಡಿಯುವ ಸಾಹಸ ಮಾಡುವುದು ಹುಚ್ಚುತನ. ಆದರೆ ಕಲಾವಿದರು ಈ ಹುಚ್ಚುತನವನ್ನು ಪ್ರೀತಿಯಿಂದಲೇ ಆಹ್ವಾನಿಸಿಕೊಳ್ಳುತ್ತಾರೆ. ನಾನೂ ಅಂಥಹ ಹುಚ್ಚರಲ್ಲಿ ಒಬ್ಬಳು. ನನಗೆ ಸಾಧ್ಯವಾದಷ್ಟು ಬಣ್ಣಗಳನ್ನು ಸ್ವಲ್ಪ ಸ್ವಲ್ಪವೇ ಕುಂಚದಲ್ಲಿ ಸೆರೆಹಿಡಿದು ಕ್ಯಾನ್ವಾಸ್ ಮೇಲೆ ಮೂಡಿಸಲು ಪ್ರಯತ್ನಿಸಿದ್ದೇನೆ. 
         ಚಿಕ್ಕಂದಿನಿಂದಲೂ ಚಿತ್ರ ಬಿಡಿಸುವುದು ನನಗೆ ಬಹಳ ಇಷ್ಟವಾದ ಹವ್ಯಾಸವಾಗಿದ್ದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಕಾಶ ಇರಲಿಲ್ಲ. ಡಾಕ್ಟರ್ ಆಗಬೇಕು ಎನ್ನುವ ಮಹದಾಸೆಯನ್ನು ಹೊತ್ತಿದ್ದ ನನ್ನ ದೃಷ್ಟಿ ಸಂಪೂರ್ಣ ಓದಿನ ಕಡೆಗಿತ್ತು. ಆದರೆ ಯಾವಾಗಲೂ ನಮ್ಮ ಕನಸುಗಳು ಸಾಕಾರವಾಗುವುದಿಲ್ಲವಲ್ಲ? ನನ್ನ ಕನಸೂ ನನಸಾಗಲಿಲ್ಲ. ನಾನು ಡಾಕ್ಟರ್ ಆಗಲಿಲ್ಲ. ಬ್ಯಾಂಕರ್ ಆದೆ. ಲೇಖಕಿ ಆದೆ. ಬ್ಯಾಂಕಿನ ಕೆಲಸದ ಜೊತೆಗೆ ಬರವಣಿಗೆಯಲ್ಲಿ ತೊಡಗಿದ್ದರಿಂದ ಬೇರೆ ಹವ್ಯಾಸಗಳಿಗೆ ಸಮಯವಿರಲಿಲ್ಲ. ಮನೆ ಮಕ್ಕಳ ಜವಾಬ್ದಾರಿಗಳೂ ಹೆಗಲ ಮೇಲಿದ್ದುವು. ಆದರೆ ಚಿತ್ರ ಬಿಡಿಸುವ ತುಡಿತ ನನ್ನೊಳಗೆ ಸುಪ್ತವಾಗಿ ಅಡಗಿತ್ತು ಎಂದು ಕಾಣುತ್ತದೆ. 
             ನಾನು ಕಲಾಶಾಲೆಗಳಲ್ಲಿ ತರಬೇತಿ ಪಡೆದ ಕಲಾವಿದೆಯಲ್ಲ ಎನ್ನುವುದನ್ನು ಇಲ್ಲಿ ಒತ್ತಿ ಹೇಳಬಯಸುತ್ತೇನೆ. ಶಾಲೆ ಬಿಟ್ಟ ನಂತರ ನಾನು ಕುಂಚ ಹಿಡಿದಿರಲಿಲ್ಲ. ಮತ್ತೆ ಪುನಹ ಕುಂಚ ಹಿಡಿದದ್ದು ನನ್ನ ಅರುವತ್ತರ ವಯಸಿನಲ್ಲಿ. ಆಗ ಆದ ರಸ್ತೆ ಅಪಘಾತ ನನ್ನನ್ನು ಹಾಸಿಗೆಗೇ ಸೀಮಿತವಾಗಿಸಿದಾಗ ಈ ಹವ್ಯಾಸ ನನ್ನನ್ನು ಸೆಳೆಯಿತು. ಇದಕ್ಕೆ ಕಾರಣಕರ್ತರು ಗೆಳತಿ ನಿಮಿ ರವೀಂದ್ರನಾಥ್ ಅವರು. ಬರವಣಿಗೆ ಸಾಧ್ಯವಾಗುತ್ತಿರಲಿಲ್ಲ. ದೇಹಕ್ಕೆ, ಮನಸಿಗೆ ಆದ ಗಾಯಗಳನ್ನು ಮರೆಸುವ ಒಂದು ಹವ್ಯಾಸದ ಕಡೆಗೆ ನಾನು ಗಮನ ಹರಿಸಲೇ ಬೇಕಿತ್ತು. ಎಲ್ಲವನ್ನು ಮರೆತು ನಾನು ಎದ್ದು ನಿಲ್ಲಲೇ ಬೇಕಿತ್ತು. ಚಿತ್ರಕಲೆ ಅದನ್ನು ಸಾಧ್ಯವಾಗಿಸಿತ್ತು. ನಾನು ಇಲ್ಲಿ ಒತ್ತಿ ಹೇಳಬಯಸುವುದು ಇದನ್ನೇ. ಎಲ್ಲವನ್ನೂ ಮರೆಸುವ, ಯೋಗದಂಥಹ ಥೆರಪಿ ಚಿತ್ರಕಲೆ. ನನಗೆ  ಮರುಹುಟ್ಟು ನೀಡಿದ್ದು  ಚಿತ್ರಕಲೆ. ಮನಸಿಗೆ ಸಮಾಧಾನ ನೀಡಿದ್ದು ಚಿತ್ರಕಲೆ. ನನ್ನ ಜೀವನದ ಕೊನೆಯ ಅಧ್ಯಾಯದಲ್ಲಿ ಬಿಡಿಸಿರುವ ಚಿತ್ರಗಳನ್ನು ಇಲ್ಲಿ ಹಂಚಿಕೊಂಡಿರುವೆ. ನಾನು ನನ್ನ ಹೃದಯದಿಂದ ಬರೆದ ಚಿತ್ರಗಳು ಇವು. ಇವುಗಳನ್ನು ನೋಡಿ ನೀವು ಖುಶಿಪಟ್ಟರೆ ನಾನು ಧನ್ಯೆ.

          Nature is full of colors and life is full of colorful shades. No one can challenge the creator and catch those colors in their brush and reproduce it on the canvas as perfectly as they see in nature. It is impossible. But every artist try their best to depict what they see around them. It is only a try. I have also tried to catch the beauty and rhythms of nature in my paintings but I know I have not succeed completely.
            Drawing was my favorite hobby in my childhood. Some of the watercolor paintings I did when I was sixteen are still there with me. But, my dream was to become a Doctor. I focused my attention on studies. When my dream shattered I understood the truth of life. We can't decide our future. We have to grab what comes on our way. I did not become a doctor but became a Banker and a writer. In addition, family responsibilities took away my time. But the love towards painting was hidden inside me.
           I want to stress here that I am not a trained artist. I did not touch the brush after school days. But, Life has its own ways and we don't know what is in store for us tomorrow. We met with a near fatal road accident in 2005. I was sixty at that time. I was confined to bed for nearly six months. At that time I took to painting accidentally at the instance of my artist friend Nimi Ravidranath. I needed some thing which can make me forget the trauma of the accident and the pains. I was not able to write.  When I could sit up I started painting as a therapy. It helped me and mentally I recovered fast . It was a rebirth to me. Today painting is my passion.

No comments:

Post a Comment